ಅವತ್ತು ರವಿವಾರ, ಗಂಟೆ ಎಂಟಾದಾರೂ ಇನ್ನೂ ನಿದ್ದೆ ಮಾಡುತ್ತಿದ್ದ. ಅಲಾರಂ ಎಷ್ಟೇ ಹೊಡೆದುಕೊಂಡರೂ ಏಳಲಿಲ್ಲ. ಸುಮಾರು ಹತ್ತು ಗಂಟೆಗೆ ಬಾಗಿಲು ಬೆಲ್ ಸದ್ದಾಯಿತು. ಇವನಿಗೆ ಭಯವಾಯಿತು. ಕಳೆದು ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿ ಬಾಗಿಲು ಬೆಲ್ ಕೇಳಿದ್ದು. ಏನೇ ಆರ್ಡರ್ ಮಾಡಿದರೂ ಆಯಾ ಕಂಪನಿಯವರು ಬಂದು ಅವರಿಗೆ ಮಿಸಲಿಟ್ಟ ಬುಟ್ಟಿಯಲ್ಲಿ ತಮ್ಮ ಸಾಮಾನು ಹಾಕಿ ಹೋಗುತ್ತಾರೆ. ಪರಿಚಯದವರು, ಹತ್ತಿರದವರು ಯಾರೂ ದೇಹ ತೆಗೆದುಕೊಂಡು ಬಂದು ಭೇಟಿಯಾಗುವುದಿಲ್ಲ. ಎಲ್ಲರೂ ಅಂತರ್ಜಾಲದಲ್ಲೇ ಭೇಟಿಯಾಗುತ್ತಾರೆ.
ಹೀಗೆ ಇರುವಾಗ ಆ ಬೆಲ್ ಸದ್ದು ಭಯ ಹುಟ್ಟಿಸದೇ ಇರುತ್ತದೆಯೇ? ಸಾವಿರ ಯೋಚನೆಗಳು ಇವನ ತಲೆಯಲ್ಲಿ ಓಡಿದವು. ವಿಪಿಎನ್ ಬಳಸಿಯೇ ಪೊರ್ನ್ ನೋಡಿದ್ದೇನೆ, ಆ ಪದವನ್ನು ಸರ್ಕಾರ ಬ್ಯಾನ್ ಮಾಡಿದಾಗಿನಿಂದ ಎಲ್ಲೂ ಬಳಸಿಲ್ಲ, ಮದುವೆಯೂ ಆಗಿಲ್ಲ, ರೋಬೋಟನ್ನು ಅಸಭ್ಯ ಪದ ಬಳಸಿ ಬೈದಿಲ್ಲ, ಎಲ್ಲ ಸರಿಯಾಗೇ ಇದೇ ಎಂದುಕೊಂಡು ಹೋಗಿ ಬಾಗಿಲು ತೆಗೆದ. ಯಾರೂ ಇರಲಿಲ್ಲ. ಅವನ ಮುಂದೆ ಸ್ವಲ್ಪ ದೂರದಲ್ಲಿ ಡ್ರೋನ್ ಹಾರಾಡುತ್ತಿತ್ತು. ಅದರ ಬಗ್ಗೆ ಇತ್ತೀಚಿಗೆ ನ್ಯೂಸನಲ್ಲಿ ಓದಿದ್ದ ಆದರೆ ಸರ್ಕಾರ ಅದಕ್ಕೆ ಅನುಮತಿ ನೀಡಿರಲಿಲ್ಲ. ಸಧ್ಯಕ್ಕೆ ಅದು ಮಾತ್ರ ಅಂತಹ ಆಫರೇಷನಗಳನ್ನು ನಿರ್ವಹಿಸುತ್ತಿತ್ತು. ಯಾರಾದಾರೂ ತಪ್ಪು ಮಾಡಿದರೆ ಸರ್ಕಾರ ಡ್ರೋನ್ ಮೂಲಕ ಶೂಟ್ ಮಾಡಿ ಶಿಕ್ಷೆ ವಿಧಿಸುತ್ತಿತ್ತು.
ಈಗ ಆ ಡ್ರೋನ್ ಹತ್ತಿರಕ್ಕೆ ಬರುತೊಡಗಿತ್ತು. ಓಡಿ ಅವಸರದಿಂದ ಬಾಗಿಲು ಹಾಕಿದ. ಬಾಗಿಲನ್ನು ತೂರಿಕೊಂಡು ಗುಂಡುಗಳು ಬಂದವು. ಎಡ ಭುಜಕ್ಕೆ ಒಂದು ಗುಂಡು ತಾಗಿತು. ಹೇಗೋ ಬಚಾವಾದ. ತಾನು ಸತ್ತೆನೆಂದೇ ಭಾವಿಸಿದ್ದ, ಬದುಕಿದ್ದ. ರೋಬೋಟನಿಂದ ಚಿಕಿತ್ಸೆ ಪಡೆದುಕೊಂಡ. ಆ ಇಡೀ ದಿನವನ್ನು ಭಯದಲ್ಲೇ ಕಳೆದ. ಯಾರಾದರೂ ಮುಂದೆ ಹೇಳಬೆಕೆಂದುಕೊಂಡರೂ ಹೇಳದೇ ಹೋದ. ಅದರ ಲೈವ್ ಫೀಡನ್ನು ಆನಲೈನನಲ್ಲಿ ಅಪ್ಲೋಡ್ ಮಾಡೋಣ ಎಂದುಕೊಂಡ ಆದರೂ ಯಾಕೋ ಮನಸ್ಸು ಒಪ್ಪಲಿಲ್ಲ.
ಮರುದಿನ ಮತ್ತೆ ಬೆಲ್ ರಿಂಗಾಯಿತು. ಈ ಸಲ ಅವನು ಬಾಗಿಲು ತೆಗೆಯಲಿಲ್ಲ. ಇವನು ಹೋಗಿ ಬೆಸ್ ಮೆಂಟನಲ್ಲಿ ಬಚ್ಚಿಟ್ಟುಕೊಂಡ. ಸೆಕ್ಯುರಿಟಿ ಬ್ರಿಚ್ ಅಂತ ಅಲಾರಂ ಹೊಡೆದುಕೊಳ್ಳುತ್ತಿತ್ತು. ಮೂವರು ವ್ಯಕ್ತಿಗಳು ಮನೆ ಒಳಗೆ ನುಗ್ಗುವುದನ್ನು ತನ್ನ ಮೊಬೈಲ್ ಲೈವ್ ಪೀಡನಲ್ಲಿ ನೋಡಿದ. ಅವರು ಬೇಸ್ ಮೆಂಟ್ ಕಡೆಯೇ ಬರತೋಡಗಿದ್ದರು. ಅವನಿಗೆ ಬೇರೆ ಕಡೆ ಹೋಗಲು ಜಾಗವಿರಲಿಲ್ಲ. ಆನ್ಲೈನ್ನಲ್ಲಿ ಹೆಲ್ಪ ಎಂದು ಪೋಸ್ಟ್ ಹಾಕಿ ಅದರ ಕೆಳಗೆ ವಿಡಿಯೋದ ಲೈವ್ ಪೀಡ್ ಹಾಕಿದ. ಅದಕ್ಕೆ ಸಾವಿರ ಲೈಕ್ಸು, ಕಮೆಂಟ್ಸು ಬಂದರೂ ಅವನಿಗೆ ಏನಾಗುತ್ತಿದೆ ಎಂದು ಸಹಾಯಕ್ಕೆ ಯಾರೂ ಬರಲಿಲ್ಲ. ಅದನ್ನು ಒಂದು ನ್ಯೂಸ್ ವಾಹಿನಿಯೂ ಪ್ರಸಾರ ಮಾಡತೋಡಗಿತ್ತು. ಅವರು ಬಂದು ಅವಸರದಿಂದ ಗುಂಡು ಹಾರಿಸಿ ಇವನನ್ನು ಕೊಂದು ಹೋಗಿಬಿಟ್ಟರು.
ಅವರು ಕೊಂದು ಹೋಗುವಾಗ ಅವರ ಮೊಬೈಲಿನಲ್ಲಿ ಡೆಲಿವರಿ ಕಂಪ್ಲೀಟೆಡ್ ಎಂಬ ಸಂದೇಶ ಕ್ಯಾಮೆರಾ ಕಣ್ಣಲ್ಲಿ ಸೆರೆಸಿಕ್ಕು ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡಿತು. ಕಿಲ್ ಇಟ್ ಎಂಬುದು ನಿಜವಾಗಲೂ ಆಚರಣೆಗೆ ಬಂದಿದೆಯೇ? ಎಂಬ ಕುರಿತು ಚರ್ಚೆಗಳಾದವು. ಸರ್ಕಾರ ಇದರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿತ್ತು. ಮೊದಲ ಬಾರಿ ಕಿಲ್ ಇಟ್ ಕಂಪನಿ ಈ ಕುರಿತು ಜಾಹೀರಾತು ನೀಡಿದಾಗ ಜನ ಖುಷಿ ಪಟ್ಟಿದ್ದರು. ಕೊನೆಗೂ ನಮ್ಮ ನ್ಯಾಯ ನಾವೇ ಒದಗಿಸಿಕೊಳ್ಳುವ ಕಾಲ ಬಂತೆಂದು. ಗಟ್ಟಿಮುಟ್ಟಾದ ಆಳುಗಳನ್ನೇ ಜಗತ್ತಿನ ಬೇರೆ ಬೇರೆ ಕಡೆಯಿಂದ ತಂದಿದ್ದರು. ಪ್ರತಿ ರೋಡಿಗೆ ಅವರ ಒಂದು ಆಫೀಸು ಇತ್ತು. ಆರ್ಡರ್ ಬಂದ ತಕ್ಷಣ ಹೋಗಿ ಕೆಲಸ ಮಾಡಿ ಮುಗಿಸುತ್ತಿದ್ದರು.
ಬಳಕೆದಾರರು ಅಲ್ಲಿ ಕೊಟ್ಟ ಸೇವೆಗಳಿಂದ ಆಯ್ಕೆ ಮಾಡಬೇಕಿತ್ತು. ಹೆಚ್ಚಿಗೆ ದುಡ್ಡು ಕೊಟ್ಟರೆ ಅದನ್ನು ಕಸ್ಟಮೈಸ್ ಕೂಡ ಮಾಡಬಹುದಿತ್ತು. ಕಾಲು ಮುರಿಯಲು ಇಷ್ಟು, ಬೆದರಿಕೆ ಹಾಕಲು ಇಷ್ಟು ಇತ್ಯಾದಿ. ಹಣ ಪಾವತಿಸಿದ ಹತ್ತು ನಿಮಿಷದೊಳಗೆ ಅವರು ಕೆಲಸ ಮುಗಿಸುತ್ತಿದ್ದರು. ಕೆಲಸದಲ್ಲಿ ಹೆಚ್ಚೂ ಕಡಿಮೆಯಾದರೆ ದುಡ್ಡು ವಾಪಸ್. ಕೆಲವೊಬ್ಬರು ಇವರ ಸೇವೆಯನ್ನು ವಿಚಿತ್ರ ಬೇಡಿಕೆಗಳಿಗೆ ಬಳಸುತ್ತಿದ್ದರು. ಅವರ ಮನೆ ತುಡುಗು ಮಾಡು, ಅವರ ಮನೆ ನಾಯಿ ಬಾಲ ಕಟ್ ಮಾಡು, ಇತ್ಯಾದಿ.
ಅಂದಹಾಗೆ ಇವತ್ತು ಸತ್ತವನು ವಾರದ ಹಿಂದೆ ರೋಡಿನಲ್ಲಿ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಇನ್ನೊಬ್ಬನ ಕಡೆ ಮುಖ ಮಾಡಿ ಸೀನಿದ್ದನಂತೆ.
ಯಾರೂ ದೇಹ ತೆಗೆದುಕೊಂಡು ಬಂದು ಭೇಟಿಯಾಗುವುದಿಲ್ಲ
ವಿಪಿಎನ್ ಬಳಸಿಯೇ ಪೊರ್ನ್ ನೋಡಿದ್ದೇನೆ
ಸೆಕ್ಯುರಿಟಿ ಬ್ರಿಚ್ ಅಂತ ಅಲಾರಂ ಹೊಡೆದುಕೊಳ್ಳುತ್ತಿತ್ತು
😂😂😂😂
ee tara copy paste comment madteeni anta ivattu nan mele kill it ge order kodabedi sir🤣